Jotheyagi Hithavagi Song Lyrics in Kannada
ಜೊತೆಯಾಗಿ ಹಿತವಾಗಿ
ಸೇರಿ ನಡೆವ ಸೇರಿ ನುಡಿವ
ಜೊತೆಯಾಗಿ ಹಿತವಾಗಿ
ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದೂ ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದೂ ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ ॥2॥
ಆ ಬಾನ ನೆರಳಲ್ಲಿ
ಆ ಸೂರ್ಯನೆದುರಲ್ಲಿ
ಒಲವೆಂಬ ನಾವೀಗ
ಈ ಗಂಗೆ ದಡದಲ್ಲಿ
ಒಂದಾಗಿ ಸವಿಯಾದ
ಮಾತೊಂದ ನುಡಿವ
ಈ ಸಂಜೆ ರಂಗಲ್ಲಿ
ಈ ತಂಪು ಗಾಳೀಲಿ
ಜೊತೆಯಾಗಿ ನಾವೀಗ
ಶಂಕಗಳ ಎದುರಲ್ಲಿ
ಇಂಪಾಗಿ ಹಿತವಾದ
ಮಾತೊಂದ ನುಡಿವ
ನೀನೆ ನನ್ನ ಪ್ರಾಣ
ನಮ್ಮ ಪ್ರಣಯ ಮಧುರಗಾನ
ನೀನೆ ನನ್ನ ಪ್ರಾಣ
ನಮ್ಮ ಪ್ರಣಯ ಮಧುರಗಾನ
ನಿನ್ನ ಬಿಡಲಾರೆ ನಾ ಎಂದಿಗೂ
In addition, read also Junte Thene Daralakanna Lyrics in Telugu
ಜೊತೆಯಾಗಿ ಹಿತವಾಗಿ
ಸೇರಿ ನಡೆವ ಸೇರಿ ನುಡಿವ
ಮನಸಲ್ಲಿ ಕಂಡಾಕೆ
ನನಸಲ್ಲಿ ಇರುವಾಗ
ಎಲ್ಲರೂ ಒಂದೇನೆ
ನಿನ್ನನ್ನು ಪಡೆದಾಕೆ
ಇನ್ನೇನು ಬೇಕಿಲ್ಲ ನನ್ನಾಣೆ ನಲ್ಲ
ಹಗಲಲ್ಲಿ ಕಂಡಾಕೆ
ಇರುಳಲ್ಲಿ ಬಂದಾಸೆ
ಎಲ್ಲವೂ ಒಂದೇನೆ
ನಿನ್ನೊಡನೆ ಇರುವಾಸೆ
ಕೇಳೆ ನನ್ನ ಕೇಳೆ
ನನ್ನಾಣೆ ನಲ್ಲ
ಎಂದೂ ಹೀಗೆ ಇರುವ
ನಾವು ಎಂದೂ ಹೀಗೆ ಇರುವ
ಎಂದೂ ಹೀಗೆ ಇರುವ
ನಾವು ಎಂದೂ ಹೀಗೆ ಇರುವ
ನಿನ್ನ ಬಿಡಲಾರೆ ನಾ ಎಂದಿಗೂ
ಲಲಲ ಲಲಲಲ
ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದೂ ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದೂ ಉಸಿರಾಗಿರು
ನಿನ್ನ ಬಿಡಲಾರೆ ನಾ ಎಂದಿಗೂ ॥2॥